ಹನುಮಾನ್ ಚಾಲೀಸಾ ಸಾಹಿತ್ಯದ ಮಹತ್ವ ಮತ್ತು ಪ್ರಯೋಜನಗಳು
ಹನುಮಾನ್ ಚಾಲಿಸಾ
“ಚಾಲಿಸಾ” ಎನ್ನುವ ಪದವು “ಚಾಲಿಸ್” ಎನ್ನುವ ಪದದಿಂದ ಬಂದಿದೆ, ಇದರರ್ಥ ನಲವತ್ತು. ಚಾಲೀಸಾವು 40 ಸಾಲುಗಳ ಸ್ತುತಿ ಮತ್ತು ದೇವರ ಮೇಲಿನ ಭಕ್ತಿಯನ್ನು ಪ್ರಸ್ತುತ ಪಡಿಸುವುದಾಗಿದ್ದು, ಇದು ಅವರು ಹೇಗೆ ಶ್ರೇಷ್ಠರಾದರು ಎನ್ನುವುದನ್ನು ಅವರು ಕೈಗೊಂಡ ಕೃತಿಗಳು ಮತ್ತು ಕಾರ್ಯಗಳನ್ನು ಸ್ತುತಿಸುವುದರ ಮೂಲಕ ನೆನಪಿಸುತ್ತದೆ
ತುಳಸಿದಾಸರು ಹನುಮಾನ್ ಚಾಲೀಸವನ್ನು ಬಹಳ ಸುಂದರವಾಗಿ ಬರೆದಿದ್ದಾರೆ.
ಹನುಮಾನ್ ಚಾಲೀಸಾ ಆರತಿ
ಹನುಮಾನ್ ಎನ್ನುವುದು ಶಕ್ತಿ, ಅತ್ಯಂತ ಭಕ್ತಿ ಮತ್ತು ಸಂರಕ್ಷಣೆಯ ಸಂಕೇತವಾಗಿದೆ. ಅವರನ್ನು ವಿಶೇಷವಾಗಿ ಮಂಗಳವಾರ ಮತ್ತು ಶನಿವಾರದಂದು ಪೂಜಿಸಲಾಗುತ್ತದೆ ಹಾಗೂ ಸಾಮಾನ್ಯವಾಗಿ ದುಷ್ಟರಿಂದ ರಅಕ್ಷಣೆ ನೀಡುವವರು ಎಂದು ಪರಿಗಣಿಸಲಾಗುತ್ತದೆ. ಹನುಮಾನ್ ಚಾಲೀಸಾವು ಭಗವಾನ್ ಹನುಮಂತನನ್ನು ಸ್ತುತಿಸುವ ಒಂದು ಸ್ತುತಿ ಆಗಿದ್ದು ಹಾಗೂ ನಾವು ಆತನಲ್ಲಿ ಹೇಗೆ ಹೆಚ್ಚಿನ ನಂಬಿಕೆಯನ್ನು ಹೊಂದಿರಬೇಕು ಎನ್ನುವುದನ್ನು ತಿಳಿಸುತ್ತದೆ. ಇತರರಿಗಾಗಿ ಬದುಕಲು ಹಾಗೂ ಜಗತ್ತಿನಲ್ಲಿ ಒಳ್ಳೆಯದನ್ನು ರಕ್ಷಿಸಬೇಕು ಎನ್ನುವುದನ್ನು ಆತನು ನಮಗೆ ತಿಳಿಸುತ್ತಾನೆ ಹಾಗೂ ಜ್ಞಾಪಿಸುತ್ತಾನೆ .
ರಾಮಾಯಣದಲ್ಲಿ ಹನುಮಂತ
ರಾಮಾಯಣದಲ್ಲಿ ನಾವು ಕಾಣುವ ಅತ್ಯಂತ ವಿನಮ್ರ ಮತ್ತು ಶಕ್ತಿಯುತ ಪಾತ್ರವಾಗಿರುವುದರಿಂದ, ಸ್ವಲ್ಪ ಸಮಯದವರೆಗೆ ಆತನು ತನ್ನ ಸಾಮರ್ಥ್ಯವನ್ನು ಮರೆತುಬಿಡುತ್ತಾನೆ. ಅಂತಹ ಪಾತ್ರವನ್ನು ನೆನಪಿಸುವ ಮೂಲಕ ನಾವು ಮನುಷ್ಯರಾಗಿದ್ದು ಎಷ್ಟು ಬಾರಿ ನಮ್ಮ ಸಾಮರ್ಥ್ಯಗಳ ಬಗ್ಗೆ ಅರಿವಿರುವುದಿಲ್ಲ ಎನ್ನುವುದನ್ನು ಹಿಂದೂ ಪುರಾಣಗಳು ಪ್ರತಿಬಿಂಬಿಸುತ್ತವೆ. ನಾವು ನಮ್ಮೊಳಗೇ ನೋಡಿಕೊಳ್ಳಬೇಕು ಹಾಗೂ ಜೀವನವನ್ನು ನಡೆಸುವಾಗ ಮಾಡಬೇಕಾದ ಅನೇಕ ಪ್ರಯೋಗಗಳ ಮೂಲಕ ನಮ್ಮ ಶಕ್ತಿಯನ್ನು ನಾವೇ ಕಂಡುಹಿಡಿದುಕೊಳ್ಳಬೇಕು.
ಹನುಮಾನ್ ಚಾಲೀಸಾ ಸಾಹಿತ್ಯ
ಹನುಮಾನ್ ಚಾಲೀಸಾದ ಸಾಹಿತ್ಯವು ಅಂತರ್ಜಾಲದಲ್ಲಿ ಮತ್ತು ಪವಿತ್ರ ಗ್ರಂಥಗಳ ರೂಪದಲ್ಲಿ ಸುಲಭವಾಗಿ ಲಭ್ಯವಿದೆ. ಹನುಮಾನ್ ಚಾಲೀಸಾವನ್ನು ಸಮರ್ಪಣೆಯ ಭಾವದಿಂದ, ಲೌಕಿಕ ಪ್ರೀತಿಯಿಂದ ಹಾಗೂ ಹೃದಯದಲ್ಲಿ ಸಾಮರಸ್ಯವನ್ನು ಹೊಂದಿ ಓದಬೇಕು. ನೀವು ಬೆಳಿಗ್ಗೆ ಸ್ನಾನ ಮಾಡುವ ಮೂಲಕ ಮತ್ತು ದೇವಸ್ಥಾನವನ್ನು (ಅಥವಾ ನೀವು ಪೂಜಿಸುವ ಯಾವುದೇ ಸ್ಥಳ) ಸ್ವಚ್ಛಗೊಳಿಸುವ ಮೂಲಕ ನಿಮ್ಮ ಗೌರವವನ್ನು ತೋರಿಸಲು ಪ್ರಾರಂಭಿಸಬಹುದು. ನಂತರ ನೀವು ಸ್ಪಷ್ಟ ಹಾಗೂ ಸ್ವಚ್ಚ ಮನಸ್ಸಿನಿಂದ ಮತ್ತು ಭಗವಂತನ ಬಗ್ಗೆ ನಿಮ್ಮ ಪ್ರೀತಿ ಮತ್ತು ಭಕ್ತಿಯನ್ನು ತೋರಿಸುವ ಸಲುವಾಗಿ ಕೈಗಳನ್ನು ಜೋಡಿಸಿ ಕುಳಿತುಕೊಳ್ಳಬೇಕು.
ಹಿಂದೂ ಧರ್ಮವು ಒಂದು ಜೀವನ ವಿಧಾನವಾಗಿದೆ. ನಾವು ದಿನವಿಡೀ ಚೈತನ್ಯವನ್ನು ಸಾಕಾರಗೊಳಿಸುತ್ತೇವೆ ಮತ್ತು ಇತರರು ನಮ್ಮೊಂದಿಗೆ ತಮ್ಮ ಅತ್ಯುತ್ತಮ ವ್ಯಕ್ತಿತ್ವವನ್ನು ತೋರಿಸಿಕೊಳ್ಳಲು ಸಾಧ್ಯವಾಗದಿದ್ದರೂ ಸಹ ಅವರನ್ನು ಗೌರವಿಸುವ ಹಾಗೂ ರಕ್ಷಿಸುವ ಭರವಸೆ ನೀಡುತ್ತೇವೆ. ಆದ್ದರಿಂದ ನಮ್ಮ ಪ್ರಾರ್ಥನೆಗಳು ಕೇವಲ ಹನುಮಾನ್ ಚಾಲೀಸಾದೊಂದಿಗೆ ಕೊನೆಗೊಳ್ಳುವುದಿಲ್ಲ. ಅವರು ತಮ್ಮ ಹನುಮಾನ್ ಚಾಲೀಸಾಗಾಗಿ ಹೆಸರುವಾಸಿಯಾಗಿದ್ದಾರೆ. ಹನುಮಾನ್ ಚಾಲೀಸಾವನ್ನು ಗಾಯನ ರೂಪದಲ್ಲಿ ಪ್ರಸ್ತುತ ಪಡಿಸುವುದಕ್ಕಾಗಿಯೇ ಅವರ ಧ್ವನಿಯು ಪ್ರತಿರೂಪವಾಗಿದೆ ಅನಿಸುತ್ತದೆ. ನೀವು ಹನುಮಾನ್ ಚಾಲೀಸಾದ ಧ್ವನಿಮುದ್ರಿತ ಆವೃತ್ತಿಯನ್ನು ಕೇಳಲು ಬಯಸಿದಲ್ಲಿ, ನೀವು ಯಾವಾಗಲೂ ಗುಲ್ಶನ್ ಕುಮಾರ್ ಅವರ ಪರ್ಫಾರ್ಮೆನ್ಸ್ ಅನ್ನು ಕೇಳಬಹುದು. ಹನುಮಾನ್ ಚಾಲೀಸಾವು ಎಲ್ಲಾ ಭಾರತೀಯ ಭಾಷೆಗಳಲ್ಲಿಯೂ ಲಭ್ಯವಿದೆ. ಏಕೆಂದರೆ ಹಿಂದೂ ಧರ್ಮವು ಒಳಗೊಳ್ಳುವಿಕೆ ಮತ್ತು ಏಕತೆಯನ್ನು ಹೊಂದಿರುವುದರಿಂದಾಗಿ.
ಮಂಗಳವಾರದಂದು ಹನುಮಾನ್ ಉಪವಾಸ
ಮಂಗಳವಾರಗಳನ್ನು ಭಗವಾನ್ ಹನುಮಂತನಿಗೆ ಸಮರ್ಪಿತ ದಿನವೆಂದು ಪರಿಗಣಿಸಲಾಗುತ್ತದೆ,ಹಾಗೂ ಅನೇಕ ಜನರು ಆತನ ಬಗ್ಗೆ ತಮಗೆ ಇರುವ ಭಕ್ತಿಯನ್ನು ತೋರಿಸುವ ಹಾಗೂ ತಾವು ಎದುರಿಸುತ್ತಿರುವ ತೊಂದರೆಗಳಿಂದ ಹೊರ ಬರುವ ಸಲುವಾಗಿ ಆ ದಿನದಂದು ಉಪವಾಸವನ್ನು ಕೈಗೊಳ್ಳುತ್ತಾರೆ..
ಜನರು ಸಾಮಾನ್ಯವಾಗಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸವನ್ನು ಆಚರಿಸುತ್ತಾರೆ. ನೀವು ಬೇಗನೆ ಎದ್ದು ಸ್ನಾನದ ನಂತರ ಗಣೇಶ ಮತ್ತು ಹನುಮಂತನನ್ನು ಪೂಜಿಸಲು ಪ್ರಾರಂಭಿಸಬೇಕು. ಪ್ರಾರ್ಥನೆಯ ಸಮಯದಲ್ಲಿ ಕೆಂಪು ಬಣ್ಣವನ್ನು ಧರಿಸಿ ಮತ್ತು ಕೆಂಪು ಹೂವುಗಳನ್ನು ಅರ್ಪಿಸುವ ಮೂಲಕ ದಿನವನ್ನು ಸ್ಮರಣೀಯಗೊಳಿಸಲಾಗುತ್ತದೆ.
ಹನುಮಾನ್ ಚಾಲೀಸಾದಿಂದ ಪಡೆಯಬಹುದಾದ ಪ್ರಯೋಜನಗಳು
ಹನುಮಾನ್ ಚಾಲೀಸಾವು ನಂಬಿಕೆ, ಉತ್ತಮ ಭಕ್ತಿ ಹಾಗೂ ನಮ್ಮಲ್ಲಿಯೇ ನಂಬಿಕೆಯನ್ನು ಇಟ್ಟುಕೊಳ್ಳಬೇಕು ಎನ್ನುವುದನ್ನು ನಮಗೆ ಕಲಿಸುತ್ತದೆ. ಜೀವನವು ಕಷ್ಟಕರವಾಗಿದ್ದಲ್ಲಿ, ನೀವು ಯಾವಾಗಲೂ ಪರೀಕ್ಷೆಗೆ ಒಳಪಡುತ್ತೀರಿ ಹಾಗೂ ಉತ್ತಮ ವ್ಯಕ್ತಿಯಾಗಿ ರೂಪಿಸಲ್ಪಡುತ್ತೀರಿ ಹಾಗೂ ತಮ್ಮ ಸಾಮರ್ಥ್ಯದ ಬಗ್ಗೆ ಹೆಚ್ಚು ತಿಳುವಳಿಕೆಯನ್ನು ಹೊಂದಬಹುದು ಎನ್ನುವುದನ್ನು ನೀವು ಯಾವಾಗಲೂ ನಂಬಬಹುದು. ಭಗವಾನ್ ಹನುಮಂತನು ಇತರರನ್ನು ಅವರ ರೂಪ, ಲಿಂಗ, ದೇಶ ಅಥವಾ ಇನ್ಯಾವುದನ್ನೂ ಲೆಕ್ಕಿಸದೆ ಗೌರವಿಸುವುದನ್ನು ಕಲಿಸುತ್ತಾನೆ ಮತ್ತು ಎಲ್ಲರ ಒಳಿತಿನಲ್ಲಿ ನಮ್ಮನ್ನು ಮುಳುಗಿಸಿ ಮತ್ತು ಅದರ ಭಾಗವಾಗುವುದನ್ನು ಕಲಿಸುತ್ತಾನೆ.
Check Hanuman Chalisa in Other Indian Languages
ಹನುಮಾನ್ ಚಾಲೀಸಾ ಸಾಹಿತ್ಯದ ಮಹತ್ವ ಮತ್ತು ಪ್ರಯೋಜನಗಳು (Kannada) |
Click to View More |
हनुमान चालीसा गीत का महत्व और लाभ (Hindi) |
Click to View More |
ಹನುಮಾನ್ ಚಾಲೀಸಾ ಸಾಹಿತ್ಯದ ಮಹತ್ವ ಮತ್ತು ಪ್ರಯೋಜನಗಳು (Telugu) |
Click to View More |
Advantages of Hanuman Chalisa – Teaches us is to have faith, be a good devotee and believe in ourselves |
Click to View More |
હનુમાન ચાલીસાના ગુજરાતી ગીતનો અર્થ (Gujarati) |
Click to View More |
হনুমান চালিসা বাংলা গানের কথার অর্থ (Bengali) |
Click to View More |
हनुमान चालिसाचे मराठीत फायदे (Marathi) |
Click to View More |
മലയാളത്തിലെ ഹനുമാൻ ചാലിസ ഗാനത്തിന്റെ വരികൾ (Malayalam) |
Click to View More |
தமிழில் ஹனுமான் சாலிசா பாடல் வரிகள் (Tamil) |
Click to View More |